December 26, 2009

ಕರೆಂಟಿನ ಕಣ್ಣಾಮುಚ್ಚಾಲೆ !!!

ಬೆಳ್ಳಿಗೆ 6-12 ಘಂಟೆವರೆಗೆ ಅಥವಾ ಮಧ್ಯಾಹ್ನ 12-6 ಘಂಟೆವರೆಗೆ ನಮ್ಮೂರಿನ ಪವರ್‌ಕಟ್‌ ವೇಳಾಪಟ್ಟಿ. ಇದು ಹದಿನೈದು ದಿನಕ್ಕೊಮ್ಮೆ ಬದಲಾಗುತ್ತದೆ. ಇದರಲ್ಲೇನು ಹೊಸ ವಿಷಯ ಎಲ್ಲಾ ಕಡೆನ್ನೂ ಇದೆ ಪರಿಪಾಟ ಎಂದು ನೀವು ಹೇಳಬಹುದು. ಹೌದು ಇದು ಎಲ್ಲಾರಿಗೂ ಗೊತ್ತಿರುವ ಸಂಗತಿನೇ.. ಆದರೆ ಕರೆಂಟ್‌ ಇರುವ ಸಮಯದಲ್ಲಿನ ಮತ್ತೊಂದು ಅಘೋಷಿತ ಪವರ್‌ಕಟ್‍ ವೇಳಾಪಟ್ಟಿಯ ಬಗ್ಗೆ ನಾನು ಇಲ್ಲಿ ಹೇಳಲು ಹೋರಟಿರುವುದು.ನಾನೂ ಮೇಲೆ ಹೇಳಿದ ಸಮಯ ಬಿಟ್ಟು ಎಷ್ಟು ಹೊತ್ತು ಕರೆಂಟ್ ಅನುಗ್ರಹ ನಮ್ಮ ಮೇಲೆ ಇರುತ್ತೆ ಅನ್ನೊಂದು ಆ ದೇವರಿಗೂ ಗೊತ್ತಿಲ್ಲ. ಕರೆಂಟ್‌ ಹೋಗುವಾಗ ಇರುವ ಸಮಯ ಪರಿಪಾಲನೆ ಬರುವಾಗ ಮಾತ್ರ ಇರೋಲ್ಲ ಅನ್ನೊಂದು ಸಹ ಅಷ್ಟೇ ನಿಜ.

ದಿನದ ಆರು ಘಂಟೆಗಳ ಕಾಲದ ಪವರ್‌ಕಟ್‌ ಅಲ್ಲದೆ ಕರೆಂಟ್‍ ದರ್ಶನವಾದ ಸ್ವಲ್ಪ ಸಮಯದಲ್ಲೇ ಮತ್ತೆ 1 ರಿಂದ 2 ಘಂಟೆಗಳ ಕಾಲ ಕರೆಂಟ್‌ ಮಂಗಮಾಯ. ಸರಿ ಮತ್ತೆ ಕರೆಂಟ್‍ ಬಂತು ಸಂಭ್ರಮ ಪಡುವಾಗಲೇ ಸಂಜೆ ಸುಮಾರು ಎರಡು ತಾಸು ಕರೆಂಟ್ ಖೋತಾ. ಇದಲ್ಲದೆ ಮಧ್ಯರಾತ್ರಿ ಯಾವಾಗ ಕರೆಂಟ್‍ ಹೋಗುತ್ತೇ, ಬರುತ್ತೇ ಅನ್ನುವುದು ನಮಗೆ ತಿಳಿಯಲ್ಲ. ಆದರೆ ಕರೆಂಟಿನ ಕಣ್ಣಾಮುಚ್ಚಲೆ ಆಟ ನಿರಂತರವಾಗಿ ಜಾರಿಯಲ್ಲಿರುತ್ತೆ.

ಕರೆಂಟ್‌ಗಾಗಿ ಲೈನ್ ಮ್ಯಾನ್‌ನಿಂದ ಹಿಡಿದು ಸಂಬಂಧ ಪಟ್ಟ ಅಧಿಕಾರಿಗಳಿಗೆಲ್ಲಾ ಫೋನ್‌ ಮಾಡಿದರೂ ಪ್ರಯೋಜನ ಮಾತ್ರ ಸೊನ್ನೆ. ಎಲ್ಲರಿಂದಲ್ಲೂ ಹಾರಿಕೆಯ ಉತ್ತರ. ಯಾವುದಕ್ಕೇ ಕರೆಂಟ್‌ ಬೇಡ ನೀವೇ ಹೇಳಿ? ಈಗ ಬೇರೆ ನಮ್ಮ ಕಡೆ ಆಡಿಕೆ ಕೊಯಿಲು... ರಾತ್ರಿ ಕೆಲಸ .. ಮುಂಚೆನೇ ಕೆಲಸಗಾರ ಅಭಾವ, ಅದರ ನಡುವೆ ಕರೆಂಟೂ ಇಲ್ಲ.. ರೋಸಿ ಹೋಗಿದ್ದೇವೆ.

ಸರ್ಕಾರ,ವ್ಯವಸ್ಥೆ ಮೇಲೆ ಹೇಳಲಾದರಷ್ಟು ಕೋಪ. ಅದಕ್ಕಿಂತ ಹೆಚ್ಚಾಗಿ ಏನು ಮಾಡಲಾಗುವುದಿಲ್ಲ ಎಂದು ಸ್ವತಃ ನನ್ನ ಮೇಲೆ ಕೋಪ. ಕೈಯಲ್ಲಿ ಆಗದವನು ಮೈ ಎಲ್ಲಾ ಪರಚಿಕೊಂಡ ಎನ್ನುವ ಸ್ಥಿತಿ... ಈ ಮೂಲಕವಾದರೂ ಅಸಹನೆಯನ್ನು ತೋರಿಸುವ ಒಂದು ಪ್ರಯತ್ನ . ಈ ಕರೆಂಟ್‌ ಕಣ್ಣಾಮುಚ್ಚಲೆಯಿಂದ ನಮಗೆಲ್ಲಾ ಮುಕ್ತಿ ಸಿಗಲಿ ಎಂದು ಹಾರೈಸಿ.