ನಾವು ಚಿಕ್ಕವರಿದ್ದಾಗ ಬೆಳಿಗ್ಗೆ ಹಾಸಿಗೆಯಿಂದ ಏಳುವಾಗ ಅಪ್ಪಿತಪ್ಪಿ ಎಡ ಮಗ್ಗುಲಲ್ಲಿ ಏಳುವುದು ಅಮ್ಮ, ಹಿರಿಯಮ್ಮನ ಕಣ್ಣಿಗೆ ಏನಾದರೂ ಕಂಡರೆ ಸಾಕು, ಮತ್ತೆ ಮಲಗಿಸಿ ಬಲ ಮಗ್ಗುಲಲ್ಲಿ ಏಳೋ ವರೆಗೂ ನಮ್ನ ಬಿಡ್ತಾ ಇರ್ಲಿಲ್ಲ. ಅಮ್ಮ ಸಿಟ್ಟಲ್ಲಿ ಬೈಯ್ವಾಗಲೂ ಅಷ್ಟೆ ಇವತ್ತು ಯಾವ್ ಮಗ್ಗುಲಲ್ಲಿ ಎದ್ದಿದಿಯಾ ಗ್ರಹಚಾರ ಕಾದಿದೆ ಅನ್ನೊದು ಅಂತೂ ಸಾಮಾನ್ಯ. ಈಗಲೂ ಅವರಿಬ್ಬರು ಏನಾದರೂ ಆಗಬೇಕಾದ ಕೆಲಸ ಆಗ್ದೆ ಇದ್ದಾಗ ಅಥವಾ ಕೆಟ್ಟದು ಏನಾದರು ಆದ್ರೆ ಫಸ್ಟ್ ಹೇಳೊದೆ ಯಾಕೋ ಇವತ್ತು ಎಡ ಮಗ್ಗುಲಲ್ಲಿ ಎದ್ದಿರಬೇಕು ಅಂತ.
***
ಒಂದಷ್ಟು ಹೊತ್ತು ಯಾರಾದರೂ ಫ್ರೆಂಡ್ ಜೊತೆ ಬಿರಿಯಾನಿ ತಿನ್ತಾ ಹರಟೆ ಹೊಡಿಯೊ ಪ್ಲಾನ್ ಮಾಡ್ಕೊಂಡು ಹೋದ್ರೆ,ಯಾವಾಗಲೂ ನೀನು ಸಿಗ್ದೆ ಎಷ್ಟೋ ದಿನ ಆಯಿತು. ಕಾಫಿಗೆ ಹೋಗಣ, ಒಟ್ಟಿಗೆ ಊಟ ಮಾಡೋಣ ಅಂತ ಜೀವ ತಿನ್ತಾ ಇದ್ದ ಒಬ್ಬರಲ್ಲ ಮೂರು ಮೂರು ಜನ ಫ್ರೆಂಡ್ಸ್ ಒಬ್ಬರೂ ಫ್ರೀ ಇರ್ ಬಾರದಾ. ಕೊನೆಗೆ ಯಾರೂ ಸಿಗ್ದೆ ಮಟ ಮಟ ಮಧ್ಯಾಹ್ನ ಬಿಸ್ಲಲ್ಲಿ ಒಂಟಿ ದೆವ್ವದ ತರ ಶಿವಮೊಗ್ಗ ಪೇಟೆಲ್ಲಿ ತಿರುಗುವಾಗ, ನಂಗೆ ಅಕ್ಷರಶಃ ನಾನು ಇವತ್ತು ಬೆಳ್ಗೆ ಯಾವ್ ಮಗ್ಗುಲಲ್ಲಿ ಏದ್ದನೋ ಅಂತ ಅನ್ಸಿದ್ದು ಅಂತು ನಿಜ.
ಡ್ರಾಪ್ ಕೊಟ್ಟ ಗಂಡ ಊಟಕ್ಕೆ ಬರ್ತೀಯಾ ಅಂತ ಕೇಳಿದಾಗ , ಹೋಗೊ ನಂದು ಬೇರೆ ಪ್ರೋಗ್ರಾಂ ಇದೆ ಅಂತ ತಿರುಗೂ ನೋಡದೆ ಕಾರು ಬಾಗಿಲು ಹಾಕೊಂಡು ಬರುವಾಗ ದೇವಾರಣೆ ಅಂದ್ಕೊಡಿರಲಿಲ್ಲ ಇವತ್ತು ಊಟಕ್ಕೆ ಇವನೇ ಗತಿ ಅನ್ನೊದು. ಯಾರು ಸಿಗದೆ ಅವನಿಗೇ ರಾಗ ಎಳ್ಕೊಂಡು ಫೋನ್ ಮಾಡ್ದೆ.
ಕೊನೆಗೆ... ಫ್ರೆಂಡ್ ಜೊತೆ ಗಾಸಿಪ್ ಮಾಡ್ಕೊಂಡು ಬೆರಳು ನೆಕ್ಕಿ ಬಿರಿಯಾನಿ ತಿನ್ನೊ ಆಸೆ ಇಟ್ಕೊಂಡು ಹೋಗಿ ಅಚ್ಚುಕಟ್ಟಾಗಿ ಗಂಡನೊಟ್ಟಿಗೆ ತಿಥಿ ಊಟ ಮಾಡ್ಕೊಂಡು ಬರೋ ಹಾಗೆ ಆಯಿತು ನಿನ್ನೆ ನನ್ ಕಥೆ.
ಇದರ ಜೊತೆಗೆ ಸುಡು ಬಿಸಲಲ್ಲಿ ಸಾಕಷ್ಟು ಜ್ಞಾನೋದಯ ಕೂಡ ಆಯಿತು. ಮೊದಲನೆಯದಾಗಿ ಅಮ್ಮನ ಮಾತು ನಿಜ ಇರ್ ಬಹುದು. ಎರಡನೆಯದು ಖಂಡಿತವಾಗಿಯೂ ಹಳೆ ಗಂಡನ ಪಾದವೇ ಗತಿ ಅನ್ನೊ ಗಾದೆ ಸುಳ್ಳಲ್ಲ. ಸಾರನ್ನ ನಿಜವಾಗಲೂ ಚೆನ್ನಾಗಿರುತ್ತೆ. ಕೊನೆಯದಾಗಿ ಹಾಗೂ ತುಂಬಾ ಉಪಯುಕ್ತ ಜ್ಞಾನೋದಯ ಅಂದರೆ ನಮ್ಮ್ ಎಷ್ಟೇ ಕ್ಲೋಸ್ ಫ್ರೆಂಡೇ ಆದರೂ ಯಾವಾಗಲೂ ಫ್ರೀ ಇರ್ತಾರೆ ಅಂತ ನಮಗೆ ನಾವೇ ಇಮ್ಯಾಜಿನ್ ಮಾಡ್ಕಳದೆ... ಅವರಿಗೆ ಮೊದಲೇ ಫೋನ್ ಮಾಡಿ ಹೋಗ್ಬೇಕು.
ಆದ್ರೆ ಬಿಸಿ ಬಿಸಿ ಗರಿಗರಿ ಸೂಪರ್ ಟೇಸ್ಟಿಯಾಗಿದ್ದ ಎರಡು ಉದ್ದಿನ ವಡೆ ಮೇಲೆ ಮೊದಲೇ ನನ್ ಹೆಸರು ಬರೆದಿದ್ದು ಅಂತೂ ಗ್ಯಾರಂಟಿ ಆಯಿತು.
https://m.facebook.com/story.php?story_fbid=10214403498830691&id=1514881037

No comments:
Post a Comment