ಸಾಮಾನ್ಯವಾಗಿ
ನಮಗೆ ಹಾಗಲಕಾಯಿ ಎಂದಾಕ್ಷಣ ನೆನೆಪಾಗುವುದು ಮಧುಮೇಹ. ಹಾಗಲಕಾಯಿ ಡಯಾಬಿಟೀಸ್‌ಗೆ ರಾಮಬಾಣ ಎಂಬುದು
ಚಿರಪರಿಚಿತ. ಆದರೆ ಇದರ ಉಪಯೋಗ ಕೇವಲ ರಕ್ತದಲ್ಲಿನ ಸಕ್ಕರೆ ಅಂಶವನ್ನು ನಿಯಂತ್ರಿಲು ಮಾತ್ರ ಸೀಮಿತ ಎಂದು ಈ ಬಹುಉಪಯೋಗಿ ತರಕಾರಿಯನ್ನು ತಪ್ಪಾಗಿ ತಿಳಿಯಲಾಗಿದೆ.
ಆದರೆ ವಾಸ್ತವವಾಗಿ ಹಾಗಲಕಾಯಿ ಹಲವು ಪ್ರಯೋಜನಗಳನ್ನು ಹೊಂದಿದೆ. ಉದಾಹರಣೆಗೆ ಯಕೃತ್ತು
ಅಸ್ವಸ್ಥತೆಗೆ ಉತ್ತಮ ಔಷಧಿಯಾಗಿದೆ.ಇದು ಲಿವರ್ ಶುದ್ಧೀಕರಿಸುವ ಮತ್ತು ಅದರ ಜೀವಕೋಶಗಳು
ಪುನರುತ್ಪಾದನೆಗೆ ಸಹಾಯಕವಾಗುತ್ತದೆ. ಈ
ಆರೋಗ್ಯಕರ ತರಕಾರಿ ತುಂಬಾ ಸೌಂದರ್ಯ ಪ್ರಯೋಜನಗಳನ್ನು ಹೊಂದಿದೆ. ಇದು ತ್ವಚೆಯನ್ನು
ಮೊಡವೆಯಿಂದ ಮುಕ್ತಗೊಳಿಸಿ, ದೋಷರಹಿತ ಮೈಬಣ್ಣ ನೀಡುತ್ತದೆ.ಹೀಗೆ ಹಾಗಲಕಾಯಿ ಇತರೆ ಅನೇಕ ಆರೋಗ್ಯಕಾರಿ
ಪ್ರಯೋಜನಗಳನ್ನು ಒಳಗೊಂಡಿದೆ. ಅವುಗಳು ಕೆಲವು ಇಲ್ಲಿವೆ.
ಯಕೃತ್ತ್
ಪುನರುತ್ಪಾದನೆ :- ಹಾಗಲಕಾಯಿ ಲಿವರ್
ಶುದ್ಧಿಕರಿಸುವ ಒಂದು ತರಕಾರಿ. ಇದು ಯಕೃತ್ತನ್ನು ಶುದ್ದಗೊಳಿಸಲು ಮತ್ತು ಜೀವಕೋಶಗಳ
ಪುನರುತ್ಪಾದನೆಯಲ್ಲಿ ಸಹಾಯ ಮಾಡುತ್ತದೆ.
ಮಧುಮೇಹ :- ಹಾಗಲಕಾಯಿ ರಸ ಮಧುಮೇಹ 2ನ್ನು ಹೊಂದಿರುವ
ರೋಗಿಗಳಿಗೆ ಒಂದು ಉತ್ತಮ ಔಷಧಿ. ಇದು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಿಸಿ, ಇನ್ಸೂಲಿನ್ ಪ್ರತಿರೋಧವನ್ನು ಗುಣಪಡಿಸುತ್ತದೆ.
ತೂಕ
ನಿಯಂತ್ರಣಕ್ಕೆ ಸಹಾಯಕ :- ಹಾಗಲಕಾಯಿ ಜೀರ್ಣಕ್ರಿಯೆಗೆ ಉತ್ತಮ. ಇದು ವಯಪಚಯ ಮಟ್ಟವನ್ನು ಹೆಚ್ಚಿಸುವ
ಅಂಟಿಅಕ್ಸಿಡೆಂಟ್‌ಗಳಿಂದ ಸಹ ಕೂಡಿದೆ. ಇದಲ್ಲದೆ ಹಾಗಲಕಾಯಿ ಕಡಿಮೆ ಕ್ಯಾಲೋರಿಗಳನ್ನು ಹೊಂದಿರುವ
ಒಂದು ತರಕಾರಿಯಾಗಿದೆ.
ಚರ್ಮಕ್ಕೆ
ಉತ್ತಮ :- ಕಹಿಯಾದ ತರಕಾರಿ ಮತ್ತು ಹಣ್ಣುಗಳು ಬಹುವಾಗಿ ಚರ್ಮಕ್ಕೆ ಪ್ರಯೊಜನಕಾರಿ. ಹಾಗಲಕಾಯಿ
ಊರಿಯೂತ ವಿರೋಧಿ ಗುಣಲಕ್ಷಣಗಳನ್ನು ಹೊಂದಿದೆ ಮತ್ತು ಇದು ಚರ್ಮದಿಂದ ವಿಷಕಾರಿ ಜೀವಾಣುಗಳನ್ನು
ತೊಲಗಿಸಲು ಸಹ ಸಹಾಯ ಮಾಡುತ್ತದೆ.
ರೋಗ
ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ
:- ಹಾಗಲಕಾಯಿ
ನಮ್ಮ ದೇಹವನ್ನು ಶುದ್ದಿಗೊಳಿಸುತ್ತದೆ ಮತ್ತು ಇದು ಹೇರಳವಾಗಿ ಆಂಟಿಆಕ್ಸಿಡೆಂಟ್‌ಗಳಿಂದ
ಕೂಡಿದೆ.ಹಾಗಾಗಿ ಈ ತರಕಾರಿ ರೋಗಗಳ ವಿರುದ್ಧ ಹೋರಾಡಲು ನಮ್ಮ ರೋಗನಿರೋಧಕ ಶಕ್ತಿಯನ್ನು
ಹೆಚ್ಚಿಸುವಲ್ಲಿ ಸಹಾಯಕಾರಿಯಾಗಿದೆ.
ಮೂತ್ರಕೋಶ
ಮತ್ತು ಮೂತ್ರ ಪಿಂಡಗಳಿಗೆ ಔಷಧಿ :-
ಹಾಗಲಕಾಯಿ ಕಿಡ್ನಿಗಳನ್ನು ಶುದ್ಧಿಗೊಳಿಸುತ್ತದೆ ಮತ್ತು ಮೂತ್ರ ಕೋಶದಲ್ಲಿ
ಸಂಗ್ರಹವಾಗುವ ಕಲ್ಲುಗಳನ್ನು ಹೋಗಲಾಡಿಸಲು ಔಷಧಿಯಾಗಿ ಕೆಲಸ ಮಾಡುತ್ತದೆ.
ಉಸಿರಾಟದ
ತೊಂದರೆಗಳಿಗೆ ಪ್ರಯೋಜನಕಾರಿ :- ಹಾಗಲಕಾಯಿಯನ್ನು ನಿಯಮಿತವಾಗಿ ಬಳಸುವುದರಿಂದ ತೀವ್ರ ಉಸಿರಾಟದ
ತೊಂದರೆಗಳಾದ ಅಸ್ತಮಾ ಅಥವಾ ಶ್ವಾಸನಾಳಗಳ ಒಳಪೊರೆಯ ಉರಿಯೂತಗಳನ್ನು ಹತೋಟಿಯಲ್ಲಿಡ ಬಹುದು.
ಮಲ
ಬದ್ಧತೆಗೆ ಔಷಧಿ
:- ಹಾಗಲಕಾಯಿಯ
ಮತ್ತೊಂದು ಆರೋಗ್ಯಕಾರಿ ಪ್ರಯೋಜನವೆಂದರೆ ಈ ತರಕಾರಿ ಮಲಬದ್ಧತೆಯನ್ನು ತಡೆಯುತ್ತದೆ. ಈ ತರಕಾರಿ
ಹೇರಳವಾಗಿ ನಾರಿನಂಶವನ್ನು ಹೊಂದಿರುವುದರಿಂದ ಮಲಬದ್ಧತೆಗೆ ರಾಮಬಾಣ.
ಕ್ಯಾನ್ಸರ್
ವಿರುದ್ಧ ಹೋರಾಟ
:-
ಹಾಗಲಕಾಯಿಯಲ್ಲಿ ಆಂಟಿಅಕ್ಸಿಡೆಂಟ್‌ಗಳು
ಸಮೃದ್ಧವಾಗಿದ್ದೆ. ಕ್ಯಾನ್ಸರ್ ವಿರುದ್ಧ ಹೋರಾಡುವ ಈ ಅಂಶಗಳು ಕ್ಯಾನ್ನರ್‌ಕಾರಕ
ಜೀವಕೋಶಗಳು ದೇಹದಲ್ಲಿ ಹೆಚ್ಚಾಗುವುದನ್ನು ತಡೆಯುತ್ತದೆ.
ಹೃದಯ ಆರೋಗ್ಯ :- ಹಾಗಲಕಾಯಿ ರಕ್ತದಲ್ಲಿ ಕೆಟ್ಟ ಕೊಬ್ಬನ್ನು
ಕಡಿಮೆ ಮಾಡುವಲ್ಲಿ ಸಹಾಯಕಾರಿಯಾಗಿದೆ ಎಂಬ ಮಹತ್ವರವಾದ ಫಲಿತಾಂಶವನ್ನು ಕಂಡುಬಂದಿದೆ. ಇದು
ಅಪಧಮನಿಗಳು ಮುಚ್ಚಿಹೋಗುವುದನ್ನು ತಡೆಯುತ್ತವೆ ಮತ್ತು ನಮ್ಮ ಹೃದಯ ಆರೋಗ್ಯವಂತವಾಗಿರಲು ಸಹಾಯ
ಮಾಡುತ್ತದೆ.
No comments:
Post a Comment